ಉತ್ತರ ಕನ್ನಡದ ಗಾದೆಗಳು
ಖರ್ಜೂರದ ಹಣ್ಣಾದಾಗ ಕಾಗೆಯ ಬಾಯಲ್ಲಿ ಹುಣ್ಣು.
ಶುಭ ನುಡಿಯೇ ಮದುವಣಗಿತ್ತಿ ಅಂದರೆ ಹಂದರದೊಳಗಿದ್ದವರೆಲ್ಲಾ ಬೋಳೇರಾ ಎಂದಳು
ಸೋಬಾನೆ ಹಾಡೇ ಸುಬ್ಬಕ್ಕ ಅಂದರೆ ಹಂದರದೊಳಗಿದ್ದವರೆಲ್ಲಾ ಗರತಿರಲ್ವಾ ಎಂದಳು
ಅಕ್ಕಸಾಲಿಗ ಚುಚ್ಚಿದರೆ ನಚ್ಚ ನಚ್ಚಗೆ
ಎಲ್ಲ ಕೆಲಸ ಆದ ಮೇಲೆ ಆದ ಮೇಲೆ ನಾನು ಬರಲಾ ಅಥವಾ ನನ್ನ ಅತ್ತೆಯನ್ನು ಕಳುಹಿಸಲಾ ಎಂದು ಕೇಳಿದ್ದಳು.
ಅಜ್ಜ ತಿನ್ನುವ ಕಬ್ಬು ರಸದಾಳಿ.
ನನ್ನನ್ನು ಕಾಡುವ ದೆವ್ವ ನೆರೆಮನೆ ಸರಸಕ್ಕನನ್ನು ಕಾಡು.
ಒಲ್ಲದ ಅಳಿಯ ಒರಳು ಕಲ್ಲು ನೆಕ್ಕಿದ್ದನಂತೆ.
ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಕೆಡಿಸಿತ್ತು.
ಅಂತೇ ಹೋಗೋಳೇ ನನ್ನ ಅಪ್ಪನ ಸೊಸೆಯಾಗು.
ಬಗ್ಗಿದಾಗಲೇ ಆಚೆ ಮನೆಯ ಅತ್ತೇರಿಗೂ ಒಂದು ನಮಸ್ಕಾರ.
ಮೊದಲು ಹುಟ್ಟಿದ ಕಿವಿಗಿಂತ ನಂತರ ಹುಟ್ಟಿದ ಕೋಡು ಚೂಪು.
ಇಷ್ಟು ಕಂಡ್ಯಾ (ಕಂಡೆಯಾ) ಯಂಕಭಟ್ರ ಮುಪ್ಪಿನ ಕಾಲಕ್ಕೆ ಮೂರು ಹೆಂಡ್ರು.
ಕರುವಿನ ಹಾರಾಟ ಗೂಟದ ಕೆಳಗೆ.
ಕುರುಡಿಯ ಕೈಲಿ ಬಾಳೆ ಒಗೆಸಿದಂತೆ.
ಆದರೆ, ಹೋದರೆ, ಹತ್ತಿ ಬೆಳೆದರೆ, ಅಜ್ಜಿಗೊಂದು ಪಟ್ಟೆ ಸೀರೆ.
ಅಲವರಿಕೆಯ ಗಂಡನಿಗೆ ತುದಿ ಕೈಯ್ಯಲ್ಲಿ ಬಾಯಿ ಬಡಿದುಕೊಂಡಿದ್ದಳು.
ಸವಿ ಕಂಡ ನಾಯಿ ಕಿವಿ ಕೊಯ್ದರೂ ಬಿಡುವುದಿಲ್ಲ.
ತಲೆಯನ್ನು ಕಡಿದು ಕೊಟ್ಟರೂ ಸೋರೆ ಬುರುಡೆ ಎಂದೇ ಹೇಳುತ್ತಾನೆ.
ಬರಗಾಲದಲ್ಲಿ ಮಗ ಉಣ್ಣಲು ಕಲಿತಿದ್ದ.
ನನಗೂ ಸಾಕಾಗಿತ್ತು, ನಾಯಕರೂ ಛೀ ಎಂದರು
ನಾವೇ ಸಾಯಬೇಕು ಸ್ವರ್ಗ ಕಾಣಬೇಕು
ನಮಗೆ ನಾವು, ಗೋಡೆಗೆ ಮಣು
ನಾನೂ ನಾಗಪ್ಪನೂ ಕೂಡಿಯೇ ಕಚ್ಚಿದೆವು.
ನೆತ್ತಿಯ ಮೇಲೆ ಬಾಯಿ ಇದ್ದಿದ್ದರೆ ಮತ್ತೊಂದು ತುತ್ತು ಉಣ್ಣುತ್ತಿದ್ದೆ.
ಕುಂಬಳಕ್ಕೆ ಹೋಗುವುದರೊಳಗೇ ಕಿವಿ ಹರಿದುಕೊಳ್ಳಬೇಡ.
ಒಲೆಯಿಂದ ಮೇಲೆ ಬೆಂಕಿ, ತಲೆಯಿಂದ ಮೇಲೆ ಸಾಲ ಆಗಬಾರದು.
ಚಿಕ್ಕಪ್ಪ ತಾನೂ ಇಕ್ಕ, ಬೇಡುವುದಕ್ಕೂ ಬಿಡ
ನಾಯಿ ತೆಗೆದುಕೊಂಡು ಹೋಗಿ ದಂಡಿಗೆ ಹತ್ತಿಸಿದರೆ ಹೊಲಸು ಕಂಡಲ್ಲಿ ಜಿಗಿದು ಹಾರಿತು
ಊರಿನೆತ್ತು ಕುಣಿಯಿತೆಂದು ಉಪ್ಪಿನೆತ್ತು ಕುಣಿದಿತ್ತು.
ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಮೂಸಿ ನೋಡಿ ಏಳು ಸಮುದ್ರದ ಆಚೆ ಎಸೆದಿತ್ತು.
ಕಾಗೆಯ ಕೈಯ್ಯಲ್ಲಿ ಕಾರುಬಾರು ಕೊಟ್ಟರೆ ಕಛೇರಿಯೆಲ್ಲ ಗಲೀಜು ಮಾಡಿತ್ತು
ಕಣ್ಣಿ ಇದೆ ಎಂದು ಎಮ್ಮೆ ಕೊಂಡಿದ್ದನು.
ದಾನ ಕೊಟ್ಟಿದ್ದನ್ನು ಮರೆಯಬೇಕು; ಸಾಲ ಕೊಟ್ಟಿದ್ದನ್ನು ಬರೆಯಬೇಕು.
ಅರಸ ಬರುವ ತನಕ ಹಲಸು ತಡೆಯುವುದಿಲ್ಲ.
ಇದ್ದವರಿಗೇ ಹೊಟ್ಟೆಗಿಲ್ಲ ಇನ್ನೊಂದು ಕೊಡೋ ಪರಮೇಶ್ವರ.
ಕೋಲು ಎಂದು ಕೊಟ್ಟರೆ ಕುದುರೆ ಎಂದು ಕುಣಿದಿದ್ದ.
ಸಿರಿ ಬಂದು ಹೊಕ್ಕುತ್ತಿರುವಾಗ ಓತಿಕ್ಯಾತವೆಂದು ತೆಗೆದು ಎಸೆz
ಎಲ್ಲಾ ಬಿಟ್ಟ ಭಂಗಿ ನೆಟ್ಟ ಗೊಂಡೆ ಹಕ್ಕಲ ಸುಬ್ರಾಯ ಭಟ್ಟ.
ಇದಿಯನ್ನು ಕಟ್ಟಿಕೊಂಡು ಸಮಾಧಿಗೆ ಹೋಗಿದ್ದನಂತೆ.
ಅತ್ತೇರೆ, ಅತ್ತೇರೆ ಅರಳಿ ಕಟ್ಟೆಗೆ ದಿಬ್ಬಣ ಬಂತು ಹಾಡು ಹೇಳಿಕೊಡಿ.
ಅರಸನ ಮಗಳಿಗೆ ಭತ್ತದ ಸುಂಗು ಚುಚ್ಚಿಕೊಂಡಿತ್ತಂತೆ.
ಆರು ಮೂರಾಗಲಿ, ಮೂರು ಆರಾಗಲಿ, ಹೆಂಡತಿಯ ತಂಗಿ ಮಾರಾಟವಾಗಿ ಹೋಗಲಿ...
ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು.

0 Comments