ಗ ಅಕ್ಷರ ಗಾದೆಗಳು
ವಿಷಯ ಪೋಣಿಕೆ
ಗ ಅಕ್ಷರ ಗಾದೆಗಳು
- ಗಂಡ ಹೆಂಡಿರ ಜಗಳ ಉಂಡು ಮಲಗುವತನಕ
- ಗಂಡ ಹೆಂಡಿರ ಜಗಳದಲ್ಲಿ ಮಕ್ಕಳು ಜಗಳ ಕಲಿತವು
- ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ
- ಗವುಜಿ ಗದ್ದಲ ಏನೂ ಇಲ್ಲ, ಗೋವಿಂದ ಭಟ್ಟ ಬಾವೀಲಿ ಬಿದ್ದ
- ಗಳಕ್ಕನೇ ಉಂಡವ ರೋಗಿ ಗಳಿಗೆ ಉಂಡವ ಭೋಗಿ
- ಗಾಣವಾಡದೆ ಎಣ್ಣೆ ಬಂದೀತೇ
- ಗಾಯದ ಮೇಲೆ ಬರೆ ಕೊಟ್ಟಂತೆ
- ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
- ಗುಡಿಸಿದ ಮೇಲೆ ಕಸವಿರಬಾರದು ಬಡಿಸಿದ ಮೇಲೆ ಹಸಿವಿರಬಾರದು
- ಗುಣಗೇಡಿ ಒಡನಾಟ ಯಾವಾಲು ದುಃಖದೇಲ್ ಇದ್ದಂತೆ
- ಗುರುವಿಗೆ ತಿರುಮಂತ್ರ
- ಗೆದ್ದವ ಸತ್ತ ಸೋತವ ಸತ್ತ
- ಗಾಳಿ ಬಂದಾಗ ತೂರಿಕೋ
- ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ
- ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ?
- ಗಾಜಿನ ಮನೇಲಿರೋವ್ರು ಅಕ್ಕಪಕ್ಕದ ಮನೇ ಮೇಲೆ ಕಲ್ಲೆಸೆಯಬಾರದು
- ಗಾಯದ ಮೇಲೆ ಬರೆ ಎಳೆದಂತೆ
- ಗೋರ್ಕಲ್ಲ ಮೇಲೆ ಮಳೆಗರೆದಂತೆ
- ಗಡ್ಡಕ್ಕೆ ಬೇರೆ ಸೀಗೇಕಾಯಿ
- ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
- ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು.
- ಗಂಡ ಸರಿಯಿದ್ರೆ ಗುಂಡೂ ಪಾವನ
- ಗಂಡ-ಹೆಂಡಿರ ಜಗಳ ತಿಂದು ಮಲುಗೊ ವರೆಗೆ
- ಗಂಡಸಿಗೇಕೆ ಗೌರಿ ದು:ಖ ?
- ಗಂಡಸು ಕೂತು ಕೆಟ್ಟ ;ಹೆಂಗಸು ತಿರುಗಿ ಕೆಟ್ಟಳು
- ಗಂಟೂ ಹೋಯ್ತು;ನಂಟೂ ಹೋಯ್ತು
- ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ
- ಗಂಜಿ ಕುಡಿಯೋನಿಗೆ,ಮೀಸೆ ಹಿಡಿಯುವವನೊಬ್ಬ
- ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದಂತೆ
- ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ
- ಗೆದ್ದೆತ್ತಿನ ಬಾಲ ಹಿಡಿದ ಹಾಗೆ
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
- ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟರು
- ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರು.
- ಗುಡ್ಡ ಕಡಿದು ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ
- ಗುಂಪಿನಲ್ಲಿ ಗೋವಿಂದ
- ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
- ಗುರುವಿಗೇ ತಿರುಮಂತ್ರ
- ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು.
- ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
- ಗಂಡ ಹೆಂಡಿರ ಜಗಳ ಉನ್ಡು ಮಲಗೊ ತನಕ
- ಗವುಜಿ ಗದ್ದಲ ಏನೂ ಇಲ್ಲ, ಗೋವಿಂದ ಭಟ್ಟ ಬಾವೀಲಿ ಬಿದ್ದ
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
0 Comments