ಪೂಜೆಗೆ ಅಥವ ದೈವ ಸಂಬಂಧಿಸಿತ ಗಾದೆಗಳು
ಪೂಜೆಗೆ ಅಥವ ದೈವ ಸಂಬಂಧಿಸಿತ ಗಾದೆಗಳು
- ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
- ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
- ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
- ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
- ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ
- ಬಿರಿಯ ಉನ್ದ ಬ್ರಹ್ಮನ ಬಿಕ್ಶೆ ಬೆದಿದನನ್ಥೆ
- ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ
- ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ
- ಊದಿ ಕೆಟ್ಟ ಬೂದಾಳ ದಾಸ
- ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
- ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ
- ಹೋದ ಬದುಕಿಗೆ ಹನ್ನೆರಡು ದೇವರು
- ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
- ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು
- ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
- ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
- ಸುಳ್ಳು ದೇವರಿಗೆ ಕಳ್ಳ ಪೂಜಾರಿ
- ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ
0 Comments